ಬೆಳಕು

ಕವನ: ಬೆಳಕು

ಬೆಳಗುತಿದೆ ಹೊಳೆಯುತಿದೆ
ಹಿರಿದಾಗಿ ಕಿರಿದಾಗಿ
ಕಣ್ಣ ಕೋರೈಸುವ ವಿಶ್ವರೂಪ.

ಗತ ಶತಮಾನಗಳ ಬಾಗಿನ
ಹಿಂದು ಮುಂದಾದರೂ
ನನಗೆ ದಕ್ಕಿದ್ದು ನನಗೆ.

ಜೀವಧಾತುಗಳು
ಗುರುತು ಸಿಕ್ಕದೆ ಹೋಗಿ
ಪ್ರಶ್ನೆಗಳ ಸುಳಿಗಾಳಿ.

ಬೆಳಕಿನರಮನೆಯಲ್ಲಿ
ತಳವಿರದ ಕತ್ತಲಲ್ಲಿ
ತೂಗಾಡುವ ಸವಾಲು.

ಹೀರುತ್ತಿದೆ ಮುಗಿಯುತ್ತಿದೆ
ಕರಕಲಾಗಿ ಬೀಳುತ್ತಿದೆ
ಬೆಳಕಿನ ಬೂದಿ.

ಬಂಗಾರದ ಅಂಗಳದಲ್ಲಿ
ಮಿಸುಕಾಡದ ಬಂಜೆ
ದಂಡಾಧಿಪತಿ ನಾನು.

- ವನಿತಾ ಪಿ ವಿಶ್ವನಾಥ್

Comments

Popular posts from this blog

ಕುತೂಹಲಿಗರು

ಪರೀಕ್ಷಾರ್ಥಿಗಳು

ರೆಕ್ಕೆ