ರೆಕ್ಕೆ


ಎತ್ತ ತಿರುಗಿದ್ದೆನೋ ಆಗ
ಜೊತೆಗಿದ್ದವುಗಳು
ಕಳಚಿ ಹಾರುವಾಗ.

ಉದುರಿಹ ರಂಗುರಂಗಿ‌ನ
ಗರಿ ಪುಕ್ಕಗಳು
ತೂರಿವೆ ಬಿಸುಗಾಳಿಗೆ.
ಚೀರುತಿವೆ ಎಲ್ಲೋ ಗುಂಪಾಗಿ
ಹೆಕ್ಕಿ ಹೆಕ್ಕಿ ಮೇವ
ಪಾಚಿಕಟ್ಟಿದ್ದ ನೀರ ಕಲಕಿ
ಕೊಕ್ಕಿಟ್ಟು ಹೀರಿ ಕೆನೆದು
ಬೆಚ್ಚಗಿದ್ದವೋ ತೆಕ್ಕೆಯಲ್ಲಿ.
ಪಳಗಿಸಲೇ ಇಲ್ಲ
ಮತ್ತೆ ಬರುವುದಿತ್ತ.

ಕತ್ತೆತ್ತಿ ನೆಲ ಮರೆತು
ಸಾಗಿತೋ ದೂರ ದೂರಕೆ ಹೆಜ್ಜೆ
ತಲುಪಿದ್ದೆ ಅರಿಯುವುದರೊಳಗೆ
ಬೂದಿ ರಾಶಿಯ ಬದಿ.

ಗಬೆಯು ಬಡಿಯುತಿದೆ
ಒಳಗಿಂದ
ಆರಿಲ್ಲ ತೀರದ ಕಾವು.
ಎಂದೋ ದೇಹಿ ದೇಹಿ ಎಂದ
ದಾಹಗಳು
ಬಾಯ್ತೆರೆದು ಬರಿದಾಗಿವೆ
ಮತ್ತೆ ಇತ್ತಣಿಂದೆತ್ತ
ಪರಿಪರಿಯ ಪರದಾಟ.

ಬಲಿತದೆಂದೋ ಅವು
ರೆಕ್ಕೆ ಬಡಿವಾಗ
ಸದ್ದು ಕೇಳಲೆ ಇಲ್ಲ
ಹಾರಿರಬಹುದು ಈ ಊರ
ದಾಟಿ ಅತ್ತ
ಅತ್ತ.... ದೂರದತ್ತ.

- ವನಿತಾ ಪಿ ವಿಶ್ವನಾಥ್

Comments

Popular posts from this blog

ಕುತೂಹಲಿಗರು

ಪರೀಕ್ಷಾರ್ಥಿಗಳು