ಹೆಜ್ಜೆಗಳ ಸಾಲು


ನೆನಪಿನ ಸುರುಳಿಯಲ್ಲಿ
ಅನಂತ ಭಾವಗಳ
ಒಕ್ಕೊರಲು
ಕಡಲ ತಡಿಗೆ ಇಳಿದರೆ.

ಹಂಗಿರದ ಆಕಾಶನೀಲಿ
ಹಂಬಲಿಸುವ ಹಗಲ ಕಡಲು...

ಅಲೆ ಉಬ್ಬರದ ತಡಿಯಲ್ಲಿ
ಮರೆತು ಕುಳಿತಾಗೊಮ್ಮೆ
ದಡದ ಮರಳು ಇಳಿದು
ಕಡಲ ತೆರೆಯ ಉಕ್ಕಿಗೆ
ಕಡಲು ಒಡಲು
ಅಭೇದದ ದಡ.

ಆ ಮೋಡಕ್ಕೂ ಒಮ್ಮೆ
ಭ್ರಾಂತು ಹಿಡಿದಂತೆ
ಕಡಲ ಎದೆಗೆ
ಮಳೆಗರೆಯುತ್ತದೆ...!

ಒಳಗಡಲ ಹರವು
ಮನದ ಚಿಪ್ಪಗೆ ಇಳಿವ
ಕಸುವು.

ಕಡಲ ಪ್ರೀತಿಸಲಾದೀತೆ?
ಎಷ್ಟೋ ಹೆಜ್ಜೆಗಳ ಸಾಲು
ಮಳಲ ದಂಡೆಯಲಿ
ಬಿಟ್ಟು ಬಂದ
ವಿರಹಿಗಳು....

https://avadhimag.com/?p=227635

Comments

Popular posts from this blog

ಕುತೂಹಲಿಗರು

ಪರೀಕ್ಷಾರ್ಥಿಗಳು

ರೆಕ್ಕೆ