ಮೋಟು ಲಂಗ ಉದ್ದಜಡೆ ಆಕಾಶಕ್ಕೆ ಅಂಬು ಹಾಸಿದ ಏಳುಸುತ್ತಿನ ಮಲ್ಲಿಗೆ ಕೈಗೆಟುಕು.. ಎಟುಕು ಕುಣಿದಾಗೆಲ್ಲಾ! ಬಾಯ್ತುಂಬ ನಕ್ಕಳು ಅಜ್ಜಿ ಅವಳ ಎಲೆ ಅಡಿಕೆ ಚೀಲಕ್ಕೆ ಹೊಲಿಯಲಾರದ ತೂತು ಮುಗ್ಗಲು. ಪುಟ್ಟ ಬಾಲೆಯ ಪುಸ್ತಕದ ಬ್ಯಾಗಿನ ತಳದ ಚಿಲ್ಲರೆ ಕ್ಯಾಂಡಿ ಚಾಕಲೇಟು ನಿಂಬೆ ಹುಳಿ ಖಾಲಿ ಖಾಲಿ. ತಿಂಗಳು, ಬೇಗ ಮುಗಿಯದ ಜುಲುಮೆ. ಅಪ್ಪಕೊಟ್ಟ ದೊಡ್ಡ ನೋಟು ನವಿಲು ಗರಿಗಳ ನಡುವೆ ದಶಕಗಳೇ ಕಳೆದ ನೆನಪು! ಹಳೇ ಆಲ್ಬಮ್ನ ಪುಟತಿರುವಿದಾಗೆಲ್ಲಾ ಅರೆ ಸಂಕೋಚದ ಮುದ್ದೆ ಅಮ್ಮ. ಅವಳ ಟ್ರಂಕಿನಲ್ಲಿ ಮಡಿಕೆಯ ನಡುವಿನ ಬಾತುಕೋಳಿಯ ಓಲೆ ಮಾಯವಾದ್ದು ಈಕೆ ಬಿಡಿಸೇ ಇರದ ಒಗಟು! ಒಗಟು ಅಂದಾಗೆಲ್ಲಾ ಅಜ್ಜಿ ಕತೆ ಸುರುವಿಡುತ್ತಾಳೆ.. ಏಳು ಸಾಗರದಾಚೆ.. ಕಾಡು ದಾಟಿ, ಮಾಮರದ ನಡುವೊಬ್ಬಳು ಕನವರಿಕೆಯಾಕೆ. ಅಜ್ಜಿ, ಅಮ್ಮ, ಅತ್ತೆಯರು ಸರದಿಯಲ್ಲಿ ಹೊತ್ತು ದಾಟಿಸಿದ ಸರಗಳು ತೊನೆದು ಕುತ್ತಿಗೆ ಭಾರದ ಕಿಸೆ ಇಲ್ಲದ ರಾಜಕುಮಾರಿ! ಈಕೆಗೆ ಪ್ರಾಯವೆಂದರೆ ಕೇಳಬೇಕೆ? ಪರಧಾರೆಯ ಗೌಜು ಗದ್ದಲ.. ಈಗಲು ಅದು ಸುದೀರ್ಘದೆ ಕಳೆದು ಹೊಗುವ ಕನಸ್ಸು... ಹಂಗಿನ ಪ್ರಯಾಣ! ಮೌನದ ತೊಡಿಗೆಯ ಬಾಲೆ ಮನೆಯಿಂದ ಮನೆಹೊಕ್ಕು ಗುಸುಗುಡುವ ಕತೆಯಾಗುತ್ತಾಳೆ. ಹೂಗಣ್ಣು ತಿಳಿವ ಸುರುವಿಕೊಂಡಲ್ಲಿ ಅವನ ತೋಳಾದರು ಕಿಸೆಯ ಅಂತರ್ಪಟ ಹಾರಾಡುತ್ತದೆ. ಮಣಿಯದ ಬದುಕು... ಕಿಸೆಗಳು ಮೂಡಹತ್ತುತ್ತವೆ ಬ್ಯಾಗಿಗೆ. ಹರವಿಕೊಂಡ ಆಕಾಶ ಅಗಣಿತ ತಾರೆ ಜತನ ಮಾಡಿದ ಬ...
Comments
Post a Comment