ನಿದ್ದೆ ಎಚ್ಚರದ ನಡುವೆ

ಕಾಣದ ಊರ
ದಾರಿಗಳು
ಹಲವೊಮ್ಮೆ
ಯಾಕೆ ಕನಸ್ಸಿನಾಗೆ
ಬರುತ್ತವೆ?

ಪರಿಚಿತರೆಲ್ಲ ಬಳಗ!
ತೀರದ ಭಾರದ
ಹೆಜ್ಜೆಯ ನಡೆ
ಬೆಂಬಿಡದೆ
ಕಾಡುವ ಮಗು
ರೋಧಿಸುತ್ತದೆ

ತಿಳುವಳಿಕೆ ಉವಾಚಗಳು
ಒಗ್ಗದಾಗ
ಮುಂದೆ ಏನೂ ಆಗದೊಂದು
ನಿದ್ದೆ ಎಚ್ಚರ ನಡುವೆ
ಕನಸ್ಸು
ಮುಗಿಯುತ್ತದೆ.

Comments

Popular posts from this blog

ಕುತೂಹಲಿಗರು

ಪರೀಕ್ಷಾರ್ಥಿಗಳು

ರೆಕ್ಕೆ