ನೀರ ಹಾಯಿಯ ಹೂವು

ಎದೆಯ ಉರಿವ ಕಿನಿಸು
ಮತ್ಸರ ಮಸೆತವು
ಉಲ್ಕೆಯ ಆವೇಶದ ಕಿಡಿಗಳು.

ಹೊಲದ ಬೇಲಿ ಬದಿಯ ಕಾಡಿನ
ಎದೆಗಿಟ್ಟ ಬೆಂಕಿಯ
ಉರಿಯೂ..

ಹಾಯಿಗಾಳಿಗೆ ಅಲೆಯುಂಗುರ ತೊಟ್ಟು
ತನ್ನದಲ್ಲವೀ ಗೊಡವೆ
ಬದುಕಿನ ಲಯಕೆ 
ಒದಗದ ಗುಟ್ಟ ಧೇನಿಸುವಂತೊಂದು
ನೀರ ಹಾಯಿಯ ಹೂವು.
                
  - ವನಿತಾ. ಪಿ

Comments