ಬೆಳಕಿನ ಕನಸ್ಸು

ಹೊರಡುವುದಿತ್ತು
ಎಲ್ಲಿಗೆ..?
ಕಣ್ಣ ಬಣ್ಣವನ್ನೇ ಬಳಿದುಕೊಂಡ
ಕನಸ್ಸಿನಿಂದ ಬದುಕಿಗೆ   

ಅಳಿದಳಿದು ಅರಳುವ
ಕಾಮನ ಬಿಲ್ಲಿನ
ಎದೆಯ ತುಣುಕಿನ ಪಕಳೆ
ಬಣ್ಣಗಳ ಪುರಾತನ ಕುಂಚ 

ಬಣ್ಣಗಳ ಆರೋಪ
ಇರುಳ ಕುರುಡು
ಅನಂತ ಕತ್ತಲು.

ಹುಟ್ಟಿಗೆ ಭ್ರೂಣದ 
ಅಚ್ಚರಿಯನಗು 

ಕಣ್ಣಿಗೆ ಬೆಳಕಿನ ಹಸಿವು 
ದೀಪದಿಂದ ಹಗಲಿಗೆ
ಹಗಲಿನಿಂದ ಚಂದ್ರನ ಕೊಂಕಿಗೆ
ತಾರೆಗಳ ಮಿಣುಕಿಗೆ
ಹಾಲು ಹಾದಿಯ
ಬೆಳಕು ಬಾಲಂಗೋಚಿ.

ಕುಂಚ ಅದ್ದಿತೆಗೆದರು 
ಕಣ್ಣಿಗೆ ಸುರುವಿಕೊಂಡಷ್ಟೇ
ಕನಸ್ಸು.

- ವನಿತಾ ಪಿ ವಿಶ್ವನಾಥ್

Comments

Popular posts from this blog

ಕುತೂಹಲಿಗರು

ಪರೀಕ್ಷಾರ್ಥಿಗಳು

ರೆಕ್ಕೆ