ಕಾದ ಮೊದಲ ಹಣ್ಣು

ಪ್ರತಿಸಾರಿಯ ಹಾಗೆ
ಈ‌ ಬಾರಿಯು ಕಾದ
ಮೊದಲ ಹಣ್ಣು
ಹಕ್ಕಿಪಾಲಾಗಿತ್ತು.
ಬಹುಶಃ
ಆ ಹಕ್ಕಿಯ ಗೂಡಲ್ಲಿ ತತ್ತಿಯಾಗಿ
ಅದರೊಳಗಣ ಭ್ರೂಣವಾಗಿ
ಹೊರಬಂದ ಮರಿ ತಾ
ದೇಹವೇ ಹಸಿವಿನ ರೂಪದಲ್ಲಿ ಪರಿತಪಿಸೋ
ಮರಿಗಳ ಗುಕ್ಕಾಗಿರಬಹುದೋ.‌.

ಬದುಕಿನ ಅನಂತ ಮಮತೆ ಕಡಲು
ಆ ಹಕ್ಕಿ ಎದೆಯ ಸೆಳವಾಗಿ..!
ಮಳೆ ಮೋಡಗಳ ಮೇರೆ ಮೀರಿ ಹಾರುವ
ತನ್ನ ಮರಿಗಳ ಕನಸ್ಸಾಗಿ
ಹೊತ್ತು ಹಾರಿತ್ತು ಗುಕ್ಕು..ಗುಕ್ಕು.

- ವನಿತಾ ಪಿ

Comments

Popular posts from this blog

ಕುತೂಹಲಿಗರು

ಪರೀಕ್ಷಾರ್ಥಿಗಳು

ರೆಕ್ಕೆ